Current Date 15 May, 2026

"ಮೇಘನಾಳನ್ನು ನಾವೇ ನೋಡಿಕೊಳ್ಳುತ್ತಿರುವುದರಿಂದ ಅವರ ಪಾತ್ರ ಏನೂ ಇಲ್ಲ"; ಸುಂದರ್‌ ರಾಜ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿಗಳಲ್ಲಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಜೋಡಿ ಕೂಡ ಒಂದಾಗಿತ್ತು. ಆದರೆ, ಚಿರಂಜೀವಿ ಸರ್ಜಾ ದಿಢೀರ್ ನಿಧನ ಎರಡೂ ಕುಟುಂಬದಲ್ಲಿ ಸೂತಕ ವಾತಾವರಣವನ್ನು ಸೃಷ್ಟಿಸಿಬಿಟ್ಟಿತ್ತು. ಆಗ ಐದು ತಿಂಗಳ ಗರ್ಭಿಣಿಯಾಗಿದ್ದ ಮೇಘನಾ ರಾಜ್ ಮುಂದಿನ ಬದುಕು ಹೇಗಿರುತ್ತೋ ಅಂತ ಮರುಕಪಟ್ಟವರಿಗೇನು ಕಮ್ಮಿಯಿರಲಿಲ್ಲ.

ಈಗ ಚಿರಂಜೀವಿಯನ್ನು ಕಳೆದುಕೊಂಡ ನೋವಿನಿಂದ ಮೇಘನಾ ರಾಜ್ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಬೆನ್ನೆಲುಬಾಗಿ ತಂದೆ ಸುಂದರ್ ರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ನಿಂತಿದ್ದಾರೆ. ಮತ್ತೆ ಮಗಳ ಬದುಕಿಗೆ ಹೊಸ ರೂಪ ನೀಡುವುದಕ್ಕೆ ಹವಣಿಸುತ್ತಿದ್ದಾರೆ. ಇತ್ತೀಚೆಗೆ ಮಿರ್ಚಿ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಂದರ್‌ ರಾಜ್ ಕೂಡ ಇದೇ ಮಾತುಗಳನ್ನು ಹೇಳಿದ್ದಾರೆ.